ರೆಫ್ರಿಜರೇಟರ್|Refrigerator in Kannada | Fridge in Kannada|

ರೆಫ್ರಿಜರೇಟರ್ (refrigerator or fridge)

ರೆಫ್ರಿಜರೇಟರ್(Refrigerator/Fridge) ಎಂಬುದು ಆಹಾರ ಪದಾರ್ಥಗಳನ್ನು ಮತ್ತು ಇತರ ಹಾಳಾಗುವ ವಸ್ತುಗಳನ್ನು ಕೆಡದಂತೆ ತಡೆಯಲು ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲು ಬಳಸುವ ಗೃಹೋಪಯೋಗಿ ಉಪಕರಣವಾಗಿದೆ. ಉಪಕರಣದ ಒಳಭಾಗದ ಶಾಖವನ್ನು  ವಾತಾವರಣಕ್ಕೆ ವರ್ಗಾಯಿಸುವ ಮೂಲಕ ಉಪಕರಣದ ಒಳಗೆ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ತಂಪಾಗಿರಿಸುತ್ತದೆ.

ರೆಫ್ರಿಜರೇಟರಲ್ಲಿ ಕಂಪ್ರೆಸರ್, ಕಂಡೆನ್ಸರ್, ಎವಾಪರೇಟರ್ ಮತ್ತು ರೆಫ್ರಿಜರೇಟರ್  ಎಂಬ ನಾಲ್ಕು ಘಟಕ ಗಳಿವೆ ಮತ್ತು ಉಪಕರಣದ ಒಳಭಾಗದಿಂದ ಶಾಖವನ್ನು ಹೀರಿಕೊಂಡು  ಆ  ಶಾಖವನ್ನು ಹೊರಗಡೆ ಬಿಡುಗಡೆ ಮಾಡಲು ರೆಫ್ರೆಜರೆಂಟ ಅನಿಲವನ್ನು ಈ ಉಪಕರಣದಲ್ಲಿ ಬಳಸಲಾಗುತ್ತದೆ. 

ಕಂಪ್ರೆಸರ್ ರೆಫ್ರಿಜರಾಂಟ್ ಅನಿಲವನ್ನು ಸಂಕುಚಿತಗೊಳಿಸುತ್ತದೆ ಮತ್ತು ಆ ಆನಿಲ ಬಿಸಿಯಾಗುತ್ತದೆ, ನಂತರ ಅನಿಲ ಕಂಡೆನ್ಸರ್ ಮೂಲಕ ಹರಿಯುತ್ತದೆ, ಅಲ್ಲಿ ಅದು ತನ್ನ ಶಾಖವನ್ನು ಬಿಡುಗಡೆ ಮಾಡುತ್ತದೆ ಮತ್ತು ಆ ಅನಿಲ ದ್ರವವಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ದ್ರವ ರೆಫ್ರಿಜರಾಂಟ್ ಯುವಪೊರೇಟರ್ ಮೂಲಕ್ಕ ಹಾದು ಹೋಗಿ ಮತ್ತಷ್ಟು ತಂಪಾಗುತ್ತದೆ

ಈ ತಂಪಾದ ದ್ರವ ರೆಫ್ರಿಜರಾಂಟ್,  ರೆಫ್ರಿಜರೇಟರ್ನ ಒಳಭಾಗದ  ಆಹಾರ ಪದಾರ್ಥಗಳ ಶಾಖವನ್ನು ಹೀರಿಕೊಂಡು  ಮತ್ತೆ ಅನಿಲವಾಗಿ ಬದಲಾಗುತ್ತದೆ ಮತ್ತು ಈ ರೆಫ್ರಿಜರೆಂಟ ಅನಿಲ ಕಂಪ್ರೆಸ್ಸರ್ ಅನ್ನು ಪುನಹ ಪ್ರವೇಶಿಸುತ್ತದೆ. ರೆಫ್ರಿಜರೇಟರ್ ಒಳಗೆ ಕಡಿಮೆ ತಾಪಮಾನವನ್ನು ಕಾಪಾಡಿಕೊಳ್ಳಲು ಈ ಪ್ರಕ್ರಿಯೆಯು ನಿರಂತರವಾಗಿ ಪುನರಾವರ್ತನೆಯಾಗುತ್ತದೆ. .

ಆಧುನಿಕ ರೆಫ್ರಿಜರೇಟರ್ಗಳು ನಮಗೆ ಬೇಕಾದ ಹಾಗೆ ಸರಿಹೊಂದಿಸಬಹುದಾದ ಕಪಾಟುಗಳು, ಐಸ್ ಮತ್ತು ವಾಟರ್ ಡಿಸ್ಪೆನ್ಸರ್ಗಳು ಮತ್ತು ತಾಪಮಾನ ನಿಯಂತ್ರಣ ಸೆಟ್ಟಿಂಗ್ಗಳಂತಹ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

Leave a Comment

Your email address will not be published. Required fields are marked *